വിദ്യലയ വാര്‍ത്തകള്‍

<======ಮುಖ್ಯ ಶಿಕ್ಷಕರ ಹುದ್ದೆ ಭರ್ತಿ ==========<

11 Jan 2016

                          ಸಾಮಾಜಿಕ ಸಮಾನತೆಯಿಂದ ನಾಡಿನ ಪುರೋಗತಿ ಸಾಧ್ಯ.
ಮಾಣಿಮೂಲೆ ಜನವರಿ 11,​
ಸಮಾಜದಲ್ಲಿ​ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಜನರಿಗೆ ಯೋಗ್ಯ ಮಾರ್ಗದರ್ಶನ ಮತ್ತು ಸಹಕಾರ ನೀಡಬೇಕು ಆಗ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಸೇರುತ್ತಾರೆ ಇದರಿಂದ ನಾಡಿನ ಅಭಿವೃದ್ದಿಗೆ ಹಾದಿ ಸಲೀಸಾಗುತ್ತದೆ​, ಆದುದರಿಂದ ಸಮಾಜ ಸೇವಾಕಾಂಕ್ಷಿಗಳೆಲ್ಲರೂ ಈ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿ ಅನುಷ್ಠಾನಕ್ಕೆ ತರಬೇಕು ಎಂದು ಕುತ್ತಿಕ್ಕೋಲು ಗ್ರಾ ಪಂಚಾಯತ್ ಮಾಣಿಮೂಲೆ ವಾರ್ಡ್ ಸದಸ್ಯೆ  ಧರ್ಮಾವತಿ ನುಡಿದರು. ಅವರು ಜಿ.ಎಲ್.ಪಿ.ಶಾಲೆ ಮಾಣಿಮೂಲೆ ಶಾಲೆಗೆ ಗೋತ್ರಸಾರಥಿ ಯೋಜನೆಯನ್ವಯ ಏರ್ಪಡಿಸಲಾದ ವಾಹನ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು. ತಡಿಚ್ಚಿಲಂಪಾರೆ ಮತ್ತು ಚೂಲಂಗಲ್ಲು ಪ್ರದೇಶಗಳಿಂದ ಪರಿಶಿಷ್ಟ ವರ್ಗ ವಿದ್ಯಾರ್ಥಿಗಳಿಗಾಗಿ ಸಮಾಜ ಕ್ಷೇಮಾಭಿವೃದ್ದಿ ಇಲಾಖೆಯಿಂದ ವಾಹನದ ವ್ಯವಸ್ಥೆ ಯನ್ನು  ರಕ್ಷಕ ಶಿಕ್ಷಕ ಸಂಘ ಅಪೇಕ್ಷಿಸಿತ್ತು. ಇದರಿಂದ ಶಾಲೆಗೆ ಗೈರಿಹಾಜರಾಗುವ ಮಕ್ಕಳ ಸಂಖ್ಯೆ ಇನ್ನಿಲ್ಲದಾಗುವುದು.   ಉಪಾಧ್ಯಕ್ಷರಾದ ಬಿಜು, ಪ್ರೊಮೋಟರ್  ಮಾಧವಿ, ಜಗಧೀಶನ್, ಅನಿತಾ ಕುಮಾರಿ ಉಪಸ್ಥಿತರಿದ್ದರು.ಶಾಲೆಯ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ  ವಿಷಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸ್ಟಾಫ್ ಕಾರ್ಯದರ್ಶಿ ಸೀತಾರಾಮ್ ಒ ವಂದಿಸಿದರು.

No comments:

Post a Comment