വിദ്യലയ വാര്‍ത്തകള്‍

<======ಮುಖ್ಯ ಶಿಕ್ಷಕರ ಹುದ್ದೆ ಭರ್ತಿ ==========<

24 Jan 2016

 ಸಾಹಿತ್ಯೋತ್ಸವದಿಂದ ಮಕ್ಕಳ ಸೃಜನಾತ್ಮಕ ಬರಹಗಳ ಅಭಿವೃದ್ದಿ ಸಾಧ್ಯ.
 ಮಾಣಿಮೂಲೆ, ಜನವರಿ 18- ಮಕ್ಕಳು ಶಾಲಾಮಟ್ಟದಲ್ಲಿಯೇ ಓದುವ ಸಂಘವನ್ನು ಮಾಡಿ ವ್ಯವಸ್ಥಿತವಾಗಿ ಓದುವ ಹವ್ಯಸವನ್ನು ರೂಢಿಸುವಂತೆ ವ್ಯವಸ್ಥೆ ಮಾಡಬೇಕು. ಓದುವ ಸಾಮಾರ್ಥ್ಯ ಹೆಚ್ಚಿದರೆ ಮಾತ್ರ ಬರೆಯುವ ಮತ್ತು ಸೃಜನಾತ್ಮಕ ಬರಹಗಳು ಮೂಡಿಬರಲು ಸಾಧ್ಯ. ಸಮಕಾಲೀನ ಬರಹಗಳು ಸಮಾಜದ ಸ್ಥಿತಿಗತಿಗಳಿಗೆ ಕೈಗನ್ನಡಿಯಾಗಿದೆ ಆದುದರಿಂದ ಮಕ್ಕಳಿಗೆ ಎಳವೆಯಲ್ಲಿಯೇ ಓದು ಬರಹದತ್ತ ಒಲವು ಉಂಟಾಗುವಂತೆ ಎಲ್ಲಾ ಶಾಲೆಗಳಲ್ಲಿಯೂ ವಾಚನಾಲಯ, ಓದುವ ಸಂಘ, ಶಿಬಿರಗಳು ಸಾಕಷ್ಟು ನಡೆಯಬೇಕು ಎಂದು ಕತ್ತಿಕೋಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಿ.ಎನ್.ಲಕ್ಷ್ಮಿ ನುಡಿದರು.ಅವರು ಮಾಣಿಮೂಲೆ ಶಾಲೆಯಲ್ಲಿ ನಡೆದ ಪಂಚಾಯತ್ ಮಟ್ಟದ ಸೃಜನೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ವಿ.ಕುಮಾರ್ ವಹಿಸಿದ್ದರು.ಹಿರಿಯ ಚಿತ್ರಕಲಾ ಶಿಕ್ಷಕರಾದ ಬಾಲ ಮಧುರಕಾನನ, ಮಾಣಿಮೂಲೆ ವಾರ್ಡ್ ಸದಸ್ಯರಾದ ಧರ್ಮಾವತಿ,ಎಂ.ಪಿ.ಟಿ.ಎ. ಅಧ್ಯಕ್ಷರಾದ ಶೈಲಜಾ,ಬಿ.ಆರ್.ಸಿ.ತರಬೇತುದಾರರಾದ ಸಜನಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ ಅನೀಶ್ ಟಿ.ಆರ್ ವಂದಿಸಿದರು.ಸೀತಾರಾಮ ಒ ನಿರೂಪಣೆಗೈದರು.
ಉದ್ಘಾಟನಾಸಮಾರಂಭಗ ಬಳಿಕ ಸಂಪನ್ಮಲ ವ್ಯಕ್ತಿಗಳ ನೇತೃತ್ವದಲ್ಲಿ ಕಥೆ, ಕವಿತೆ, ಝಾನಪದಗೀತೆ ಮತ್ತು ಚಿತ್ರ ರಚನೆ ಶಿಬಿರಗಳು ಪ್ರತ್ಯೇಕ ಪ್ರತ್ಯೇಕವಾಗಿ ನಡೆದವು ಪಂಚಾಯತ್ ವ್ಯಾಪ್ತಿಯ ವಿವಿಧ ಶಾಲೆಗಳಿಂದ ಅರುವತ್ತು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದರು. ಬಾಲ ಮಧುರಕಾನನ,ವಿನು ಬೋವಿಕಾನ ಮತ್ತು ಸುಭಾಷ್  ಶಿಬಿರ ನಡೆಸಿದರು. ​


No comments:

Post a Comment